Monday, November 21, 2011

ಒಂದು ಪ್ರಯತ್ನ...

Friday, November 11, 2011

ಲಾಲ್ ಬಾಗ್ ಉದ್ಯಾನವನದ ಸುತ್ತ-ಮುತ್ತ...













ಹಚ್ಚುವೆವು ಕನ್ನಡದ ದೀಪಾ...



Tuesday, November 08, 2011

ಖಾಲಿ ಮನಸ್ಸು

ಮನೆಯೆಲ್ಲಾ ಖಾಲಿ
ಮನಸ್ಸೆಲ್ಲಾ ಖಾಲಿ ಖಾಲಿ

ಹೋಗುವಾಗ ಬರುವ ನಂಬಿಕೆಯಿಲ್ಲ
ಇರುವಾಗ ಜೊತೆಗಿರುವ ಕನಸಿಲ್ಲ

ಇದ್ದ ಒಂದಷ್ಟು ದಿನ ಪ್ರೀತಿ-ಸ್ನೇಹ
ಹೋದ ಗಳಿಗೆಯೇ ಬರಿಯ ನೆನಪಿನ ದೇಹ

ಬದುಕಬೇಕೆಂಬ ಬದುಕಿಗೆ ಹಿಂದಿಲ್ಲ ಮುಂದಿಲ್ಲ

(ನನ್ನ ಗೆಳತಿ ಮನೆಗೆ ಹೋದ ಗಳಿಗೆ ಹೊಳೆದ ಕವನ)

ನರ್ಮದೆಯ ತೀರದಲ್ಲಿ.....

ನರ್ಮದೆಯ ತೀರದಲ್ಲಿ
ನರುಗೆಂಪು ಹೊತ್ತಿನಲ್ಲಿ
ಕೆಂದುಟಿಗಳ ಕೆಂಪಿನಲ್ಲಿ
ಹೊಮ್ಮಿತ್ತು ಆ ಹೊಸ ಪ್ರೇಮ ||

ಇಳಿಬಿಟ್ಟ ಕೂದಲಲ್ಲಿ
ಹಣೆಗಿಟ್ಟ ಬೊಟ್ಟಿನಲ್ಲಿ
ಮುದ್ದುಗರೆವ ಮುಖದಲ್ಲಿ
ಸುರಿದಿತ್ತು ಆ ಹೊಸ ಪ್ರೇಮ ||

ನಲಿವ ಗೆಜ್ಜೆಗಳಲ್ಲಿ
ಬಳೆಯ ಕಿಣಿಕಿಣಿಯಲ್ಲಿ
ಮಿಂಚು ನೋಟಗಳಲ್ಲಿ
ನಲಿದಿತ್ತು ಹೊಸ ಪ್ರೇಮ ||

ಬೆಳದಿಂಗಳ ರಾತ್ರಿಯಲ್ಲಿ
ತಂಪನೆಯ ಗಾಳಿಯಲ್ಲಿ
ಮಲ್ಲಿಗೆಯ ಕಂಪಿನಲ್ಲಿ
ಬೆಳೆದಿತ್ತು ಹೊಸ ಪ್ರೇಮ ||

ಹೊಳೆವ ಕರಿಮಣಿಯಲ್ಲಿ
ಬೆಳ್ಳಿ ಕಾಲುಂಗುರದಲ್ಲಿ
ತುಂಬು ಹೃದಯದ ಪ್ರೀತಿಯಲ್ಲಿ
ಪರಿಪೂರ್ಣಗೊಂಡಿತ್ತು ಹೊಸ ಪ್ರೇಮ ||

(ಪವನ್ ಅಮ್ಮನ ಹೆಸರಲ್ಲಿ ಮತ್ತು ಅವರ ಹಾಗು ನೇತ್ರರ ಮದುವೆ ಸಂದರ್ಭದಲ್ಲಿ...)