ದಾಸರ ಪದಗಳು - ೧ - ಇಟ್ಟಿಗೆ ಮ್ಯಾಲೆ
ಇಟ್ಟಿಗೆ ಮ್ಯಾಲೆ ನಿಂತ ನಮ್ಮ। ವಿಠ್ಠಲ ತಾನು।
ಪುಟ್ಟ ಪಾದ ಊರಿಕೊಂಡು। ಗಟ್ಟಿ ಯಾಗಿ ನಿಂತುಕೊಂಡು।
ಟೊಂಕದ ಮ್ಯಾಲೆ ಕೈಯಾನಿಟ್ಟು। ಭಕ್ತರು ಬರುವುದ ನೋಡುವನಂತೆ। ।।ಇಟ್ಟಿಗೆ ।।
ಪಂಡರ ಪುರದಲಿ ಇರುವನಂತೆ। ಪಾಂಡು ರಂಗ ಎಂಬುವನಂತೆ।೨।
ಚಂದ್ರ ಭಾಗ ಪಿತನಿವನಂತೆ। ಅಂಗನೆ ರುಕ್ಮಿಣಿ ಅರಸನಂತೆ।೨। ।।ಇಟ್ಟಿಗೆ ।।
ಹಣದ ಆಸೆ ಇವಗಿಲ್ಲವಂತೆ। ಕನಕ ರಾಶಿ ಬೇಕಿಲ್ಲವಂತೆ।೨।
ನಾದ ಬ್ರಹ್ಮ ನೆಂಬುವನಂತೆ। ಭಕ್ತರು ಕರೆದರೆ ಬರುವನಂತೆ।೨। ।।ಇಟ್ಟಿಗೆ ।।
ಕರಿಯ ಕಂಬಲಿ ಹೊದ್ದಿಹನಂತೆ। ಹಣೆಯಲಿ ನಾಮ ಹಚ್ಚಿಹನಂತೆ।೨।
ತುಳಸಿ ಮಾಲೆ ಹಾಕ್ಯನಂತೆ। ಪುರಂದರ ವಿಠಲ ನೆಂಬುವನಂತೆ।೨। ।।ಇಟ್ಟಿಗೆ ।।

0 Comments:
Post a Comment
<< Home