ನರ್ಮದೆಯ ತೀರದಲ್ಲಿ.....
ನರ್ಮದೆಯ ತೀರದಲ್ಲಿ
ನರುಗೆಂಪು ಹೊತ್ತಿನಲ್ಲಿ
ಕೆಂದುಟಿಗಳ ಕೆಂಪಿನಲ್ಲಿ
ಹೊಮ್ಮಿತ್ತು ಆ ಹೊಸ ಪ್ರೇಮ ||
ಇಳಿಬಿಟ್ಟ ಕೂದಲಲ್ಲಿ
ಹಣೆಗಿಟ್ಟ ಬೊಟ್ಟಿನಲ್ಲಿ
ಮುದ್ದುಗರೆವ ಮುಖದಲ್ಲಿ
ಸುರಿದಿತ್ತು ಆ ಹೊಸ ಪ್ರೇಮ ||
ನಲಿವ ಗೆಜ್ಜೆಗಳಲ್ಲಿ
ಬಳೆಯ ಕಿಣಿಕಿಣಿಯಲ್ಲಿ
ಮಿಂಚು ನೋಟಗಳಲ್ಲಿ
ನಲಿದಿತ್ತು ಆ ಹೊಸ ಪ್ರೇಮ ||
ಬೆಳದಿಂಗಳ ರಾತ್ರಿಯಲ್ಲಿ
ತಂಪನೆಯ ಗಾಳಿಯಲ್ಲಿ
ಮಲ್ಲಿಗೆಯ ಕಂಪಿನಲ್ಲಿ
ಬೆಳೆದಿತ್ತು ಆ ಹೊಸ ಪ್ರೇಮ ||
ಹೊಳೆವ ಕರಿಮಣಿಯಲ್ಲಿ
ಬೆಳ್ಳಿ ಕಾಲುಂಗುರದಲ್ಲಿ
ತುಂಬು ಹೃದಯದ ಪ್ರೀತಿಯಲ್ಲಿ
ಪರಿಪೂರ್ಣಗೊಂಡಿತ್ತು ಆ ಹೊಸ ಪ್ರೇಮ ||
(ಪವನ್ ಅಮ್ಮನ ಹೆಸರಲ್ಲಿ ಮತ್ತು ಅವರ ಹಾಗು ನೇತ್ರರ ಮದುವೆ ಸಂದರ್ಭದಲ್ಲಿ...)
ನರುಗೆಂಪು ಹೊತ್ತಿನಲ್ಲಿ
ಕೆಂದುಟಿಗಳ ಕೆಂಪಿನಲ್ಲಿ
ಹೊಮ್ಮಿತ್ತು ಆ ಹೊಸ ಪ್ರೇಮ ||
ಇಳಿಬಿಟ್ಟ ಕೂದಲಲ್ಲಿ
ಹಣೆಗಿಟ್ಟ ಬೊಟ್ಟಿನಲ್ಲಿ
ಮುದ್ದುಗರೆವ ಮುಖದಲ್ಲಿ
ಸುರಿದಿತ್ತು ಆ ಹೊಸ ಪ್ರೇಮ ||
ನಲಿವ ಗೆಜ್ಜೆಗಳಲ್ಲಿ
ಬಳೆಯ ಕಿಣಿಕಿಣಿಯಲ್ಲಿ
ಮಿಂಚು ನೋಟಗಳಲ್ಲಿ
ನಲಿದಿತ್ತು ಆ ಹೊಸ ಪ್ರೇಮ ||
ಬೆಳದಿಂಗಳ ರಾತ್ರಿಯಲ್ಲಿ
ತಂಪನೆಯ ಗಾಳಿಯಲ್ಲಿ
ಮಲ್ಲಿಗೆಯ ಕಂಪಿನಲ್ಲಿ
ಬೆಳೆದಿತ್ತು ಆ ಹೊಸ ಪ್ರೇಮ ||
ಹೊಳೆವ ಕರಿಮಣಿಯಲ್ಲಿ
ಬೆಳ್ಳಿ ಕಾಲುಂಗುರದಲ್ಲಿ
ತುಂಬು ಹೃದಯದ ಪ್ರೀತಿಯಲ್ಲಿ
ಪರಿಪೂರ್ಣಗೊಂಡಿತ್ತು ಆ ಹೊಸ ಪ್ರೇಮ ||
(ಪವನ್ ಅಮ್ಮನ ಹೆಸರಲ್ಲಿ ಮತ್ತು ಅವರ ಹಾಗು ನೇತ್ರರ ಮದುವೆ ಸಂದರ್ಭದಲ್ಲಿ...)
2 Comments:
ತುಂಬಾ ಚೆನ್ನಾಗಿದೆ ಕವಿತೆ!! ಧನ್ಯವಾದಗಳು
ಮದುವೆಗೆ ಖಂಡಿತ ಬರಲೇ ಬೇಕು
tumbha chennagide kavite. nangantu tumbhane ista ahitu. nimma e kaviteyolagana hosa lokada payana munde sagi yasassu padeyali.
Post a Comment
<< Home