Wednesday, January 31, 2007

"ನೀನಾಸಂ" ಹವ್ಯಾಸಿ ಕಲಾಮಂದಿರ

ಕಲೆ ಎಲ್ಲರಿಗೂ ಒಲಿಯುವುದಿಲ್ಲ...
ಕಲೆಯೇ ಜೀವನವಾಗಿಸಿಕೊಂಡ ಈ ಹವ್ಯಾಸಿ ಕಲಾವಿದರಿಗೆ ನೀನಾಸಂ ದೇಗುಲ...
ಅವರಿಗೆ ಎಲ್ಲರ ಬೆಂಬಲ ಬಹಳ ಅಗತ್ಯ...
Support the NINASAM to grow big and give the nest to Artists.
Know more on this.
http://www.tribuneindia.com/1999/99feb14/sunday/head2.htm

Tuesday, January 23, 2007

ಆಟ!!!



ಮುಂದ್ ಹೋಯ್ ಕೂಕಂಡ್,
ಗೋಣಿ-ಚಂಪೆ ಹಾಸ್ಕಂಡ್,
ಮಂಡಕ್ಕಿ ಪ್ಯಾಕ್ ಹಿಡ್ಕಂಡ್,
ಬಾಲ-ಗೋಪಾಲ್ರ ಕುಣ್ತ ಕಂಡ್,
ಸಮಾ ನಿದ್ದೆ ಹೊಡ್ಕಂಡ್,
ರಕ್ಕಸ್ರ ಕಾಕಿಗ್ ಹೆದ್ರ್ಕಂಡ್,
ಸ್ರೀ ವ್ಯಾಷದ್ ಚೆಂದಕಂಡ್,
ಬೆಳ್ಕಾಪುಕೆ ಕಾಯ್ಕಂಡ್,
ಕಂಬ್ಳಿ-ಕುರ್ಪೆ ಹೊದ್ಕಂಡ್,
ನಿದ್ದೆ ಕಣ್ಣಲ್ ತೇಲ್ಕಂಡ್,
ಮನೆ ಬದಿ ನಡ್ಕಂಡ್,
ಬಂದ್ ಮೂಲೇಲಿ ತೆವ್ಡ್ಕಂಡ್,
ಮಂಪ್ರಲ್ ಚಂಡೆ ಕೇಣ್ಸ್ಕಂಡ್,
ಆಟ ನೆನ್ಪ್ ಮಾಡ್ಕಂಡ್,
ಸಿಕ್ಕಿದ್ ಬಣ್ಣ ಬಳ್ಕಂಡ್,
ಗೆದ್ದೆಲ್ಲೆಲ್ಲ ಹೊಯ್ಡ್ಕಂಡ್,
ಮಾಡು ಕೆಲ್ಸ ಬಿಟ್ಕಂಡ್,
ಇದ್ದವ್ರ ಜೊತೆ ಸೊಕ್ಕಂಡ್,
ಮಂಡ್ರಿ-ಗಿಂಡ್ರಿ ಹಾಯ್ಕಂಡ್,
ನೆಗ್ದ್-ಹಾರಿ ಕುಣ್ಕಂಡ್,
ಗಂಟ್-ಮೂಳೆ ಮುರ್ಕಂಡ್,
ಅಮ್ಮನತ್ರ ಬೈಸ್ಕಂಡ್,
ಅಪ್ಪಯ್ಯನತ್ರ ಬಡ್ಸ್ಕಂಡ್,
ಕಣ್ಣೀರ್ ಹಾಕ್ಕಂಡ್,
ಆಗ್ಳಿಕ್ ಮಾಡಿದ್ದ್ ಎಣ್ಸ್ಕಂಡ್,
ಮುಂದಾಪುದ್ ಕನ್ಸ್ಕಂಡ್,
ಈಗ್ಳಿನ್ ಹೊಸ ವ್ಯಾಷಕಂಡ್,
ಮನ್ಸಿಗ್ ಸ್ವಲ್ಪ ಹೇಳ್ಕಂಡ್,
ಕೇಂಡೆ,
ಬಣ್ಣ ಇಲ್ದೆ ವ್ಯಾಷವ???
ವ್ಯಾಷ ಇಲ್ದೆ ಆಟವ???
ದಿವ್ಸ ಹೊಸ ವ್ಯಾಷ, ಹೊಸ ಆಟ!!!
--------***----------