ಆಟ!!!
ಮುಂದ್ ಹೋಯ್ ಕೂಕಂಡ್,
ಗೋಣಿ-ಚಂಪೆ ಹಾಸ್ಕಂಡ್,
ಮಂಡಕ್ಕಿ ಪ್ಯಾಕ್ ಹಿಡ್ಕಂಡ್,
ಬಾಲ-ಗೋಪಾಲ್ರ ಕುಣ್ತ ಕಂಡ್,
ಸಮಾ ನಿದ್ದೆ ಹೊಡ್ಕಂಡ್,
ರಕ್ಕಸ್ರ ಕಾಕಿಗ್ ಹೆದ್ರ್ಕಂಡ್,
ಸ್ರೀ ವ್ಯಾಷದ್ ಚೆಂದಕಂಡ್,
ಬೆಳ್ಕಾಪುಕೆ ಕಾಯ್ಕಂಡ್,
ಕಂಬ್ಳಿ-ಕುರ್ಪೆ ಹೊದ್ಕಂಡ್,
ನಿದ್ದೆ ಕಣ್ಣಲ್ ತೇಲ್ಕಂಡ್,
ಮನೆ ಬದಿ ನಡ್ಕಂಡ್,
ಬಂದ್ ಮೂಲೇಲಿ ತೆವ್ಡ್ಕಂಡ್,
ಮಂಪ್ರಲ್ ಚಂಡೆ ಕೇಣ್ಸ್ಕಂಡ್,
ಆಟ ನೆನ್ಪ್ ಮಾಡ್ಕಂಡ್,
ಸಿಕ್ಕಿದ್ ಬಣ್ಣ ಬಳ್ಕಂಡ್,
ಗೆದ್ದೆಲ್ಲೆಲ್ಲ ಹೊಯ್ಡ್ಕಂಡ್,
ಮಾಡು ಕೆಲ್ಸ ಬಿಟ್ಕಂಡ್,
ಇದ್ದವ್ರ ಜೊತೆ ಸೊಕ್ಕಂಡ್,
ಮಂಡ್ರಿ-ಗಿಂಡ್ರಿ ಹಾಯ್ಕಂಡ್,
ನೆಗ್ದ್-ಹಾರಿ ಕುಣ್ಕಂಡ್,
ಗಂಟ್-ಮೂಳೆ ಮುರ್ಕಂಡ್,
ಅಮ್ಮನತ್ರ ಬೈಸ್ಕಂಡ್,
ಅಪ್ಪಯ್ಯನತ್ರ ಬಡ್ಸ್ಕಂಡ್,
ಕಣ್ಣೀರ್ ಹಾಕ್ಕಂಡ್,
ಆಗ್ಳಿಕ್ ಮಾಡಿದ್ದ್ ಎಣ್ಸ್ಕಂಡ್,
ಮುಂದಾಪುದ್ ಕನ್ಸ್ಕಂಡ್,
ಈಗ್ಳಿನ್ ಹೊಸ ವ್ಯಾಷಕಂಡ್,
ಮನ್ಸಿಗ್ ಸ್ವಲ್ಪ ಹೇಳ್ಕಂಡ್,
ಕೇಂಡೆ,
ಬಣ್ಣ ಇಲ್ದೆ ವ್ಯಾಷವ???
ವ್ಯಾಷ ಇಲ್ದೆ ಆಟವ???
ದಿವ್ಸ ಹೊಸ ವ್ಯಾಷ, ಹೊಸ ಆಟ!!!
--------***----------
9 Comments:
ಆಹಾ... ಅದ್ಭುತ, ಅದ್ಭುತ!!
ಬಹಳ ಸುಂದರವಾಗಿದೆ...
ಹ್ವಾಯ್,
ಮಸ್ತ್ ಬರ್ದೀರಲೆ!!
ವ್ಹಾವ್! ಇತ್ತ ಕಡೆ ಬರದೇ ಭಾಳಾ ದಿನ ಆಗಿತ್ತು. ಜೋರು ಆಟ ನಡೆದಿದ್ರೂ ನಮ್ಕಡೆ ಚಂಡೆ ಶಬ್ದವೇ ಕೇಳಿಸಿರ್ಲಿಲ್ಲ.. ಆಹಾಹಾಹ! ಏನು ಆಟ ನೆಡಸೀರಿ ಮಾರಾಯ್ರೇ..!
gubbachchi...
ee anubhava nanagoo aagide!
sogasaagide..nenepisikoTTiddakke dhanyavaadagaLu.
haageye illiruva yakshagaanada chitravanna copy maaDkonDiddene...nimagyaava abhyantara illa andkoLtene...
ಯಕ್ಷಲೋಕದ ಮುಮ್ಮೇಳ ಹಿಮ್ಮೇಳವೆರಡರ ದರುಶನಕೆ, ಕುಂದಾಪ್ರ ಭಾಷೆಯ ಸೊಗಕ್ಕೆ, ದಿನದಿನದ ಬಣ್ಣಗೆಟ್ಟ ಆಟದ ನಡುವೆಯೂ ಬಣ್ಣಕಟ್ಟಿದ ಪದಸಾಲುಗಳ ವೇಷಕ್ಕೆ ಮನಸಾರೆ ವಂದನೆಗಳು. ನಿಮ್ಮ ಭಾಷೆಯಲ್ಲಿ, ನಿಮ್ಮ ಚಿತ್ರ ಅಭಿವ್ಯಕ್ತಿಯಲ್ಲಿ ಮತ್ತಷ್ಟು ದೊಡ್ಡವೇಷಗಳು ಕಟ್ಟುವಂತಾಗಲಿ.. ಪ್ರೀತಿಯಿರಲಿ.
@Ullasa: Not exactly my own experience...bit of imagination too.
@alpazna :welcome to my blog
@Srinidhi, Sushrutha : Thanks
@promod : You can no problem.
@Sindhu : welcome
Its a pleasure to read such poems. nammUr baasi baLaskaMD laayk kavite bardidree
Rgds,
Vicky
Hi , Good work. Keep it up!!!
really thumba chennagide... mansige kushi kodthu...:)
Post a Comment
<< Home