Monday, March 12, 2012

ಮುಗ್ಧ-ತುಂಟ ಕಣ್ಣುಗಳೊಂದಿಗೆ :)




Wednesday, March 07, 2012

ರಾಮಣ್ಣನ ನಗು..

ಆಚೆಮನೆಯ ಕೆಲಸದ ರಾಮಣ್ಣ ದಿನಾಲೂ ನಮ್ಮ ಮನೆಗೆ ಮಜ್ಜಿಗೆ ಕುಡಿಯಲು ಬರುವುದು ಒಂದು ರೂಢಿ. ಕಿವಿ ಸ್ವಲ್ಪ ದೂರ. ಎಷ್ಟು ಬೊಬ್ಬೆ ಹೊಡೆದರು ಕೇಳುವುದಿಲ್ಲ. ಬೊಬ್ಬೆ ಹೊಡೆದು ಸಾಕಾಗಿ ಅಮ್ಮ ಕೈ ಸನ್ನೆ ಬಾಯಿ ಸನ್ನೆ ಮಾಡಿ ತೋರಿಸಿ ಸುಮ್ಮನಾಗುವುದು ವಾಡಿಕೆ. ನಾನು ಕ್ಯಾಮೆರಾ ಹಿಡಿದು ನಮ್ಮ ನಾಯಿಯ ಫೋಟೋ ತೆಗಿಬೇಕಂತ ಇರುವಾಗ ನನ್ನನ್ನೇ ನೋಡುತ್ತಿದ್ದ. ಹಾಗೆ ಅವನ ಫೋಟೋ ಕೂಡ ತೆಗಯ ಹೊರಟೆ. ಅವನ ಮುಖದಲ್ಲಿ ಎಲ್ಲಿಲ್ಲದ ಸಂತೋಷ. ತೆಗೆದ ಫೋಟೋ ತೋರಿಸಿದಾಗ ಮತ್ತಷ್ಟು ಸಂಭ್ರಮ.


ಅವನ ಮುಗ್ಧತೆ, ಕಣ್ಣಿನಲ್ಲಿನ ಖುಷಿ, ಫೋಟೋ ತೆಗೆಸಿಕೊಂಡ ಸಂತಸ ಇವುಗಳನ್ನು ಸೆರೆಹಿಡಿಯಲು ಸಾಧ್ಯ ಇಲ್ಲ. ಬೇರೆಯವರ ಸಂತೋಷಕ್ಕೆ ನಮ್ಮ ಒಂದು ಸಣ್ಣ ಸನ್ನೆ ಕಾರಣ ಆದರೆ ಆ ಖುಷಿ,ತೃಪ್ತಿಗೆ ಸಾಟಿ ಇಲ್ಲ ಅಂತ ಅನ್ನಿಸಿತು.