Monday, November 06, 2006

ಹೊಯ್ದಾಟ

ತಿಳಿನೀಲ ಸೀರೆಯಲಿ ಆಕಾಶದ ಸೊಬಗು
ನೀಳ ಜಡೆಯಲ್ಲಿ ಮಲ್ಲಿಗೆ ಮೊಗ್ಗಿನ ಬೆಡಗು

ತೆಗೆದ ಬೈತೆಲೆಯಲ್ಲಿ ಎಣ್ಣೆಯ ಮಿಂಚು
ಕಿವಿಯೋಲೆ, ಮೂಗುತಿ ತೊಡೆದಿದೆ ಕತ್ತಲ ಸಂಚು

ಕಣ್ಗಪ್ಪಿನ ನಡುವೆ ಹೊಳೆಯುತಿದೆ ಬಿಂದು
ವಿಶ್ವ ಪಥಕೆ ಹಾಕಿದ ಸಿಂಧು

ತುಂಬಿದ ಹಾಲ್ಗೆನ್ನೆಯಲಿ ಅರಶಿನದ ಕಳೆ
ಕೈಯ ಬಳೆಯಲ್ಲಿ ಹರಿಯುತಲಿದೆ, ಸಾಂಪ್ರದಾಯಿಕ ಹೊಳೆ

ತೆಗೆದ ಶ್ರುತಿಯಲ್ಲಿ ಸುಶ್ರಾವ್ಯ ಸಂಗೀತ....

ತಂಬೂರಿ ಹಿಡಿದ ಕೈಗಳು ಬೇಡುತಿವೆ ಹೊಸಗನಸು...

ಬದಲಾಗಿದೆ, ಸೀರೆ ಪ್ಯಾಂಟ್-ಶರ್ಟಿಗೆ, ಎಣ್ಣೆ ಕಾಣದ ಜಡೆ ಕ್ರಾಪಿಗೆ, ಅರಶಿನ ಮೆಕಪ್ಪಿಗೆ
ಮಾಯವಾಗಿದೆ ಮೂಗುತಿ-ಕಿವಿಯೋಲೆ
ಬಳೆಯಿಲ್ಲದ ಕೈಗಳು ಸಾರುತಿವೆ ಆಧುನಿಕತೆ

ಇಂದೂ ನುಡಿಸಲಿಚ್ಚಿಸಿದೆ ಮನ ತಂಬೂರಿ...

ತೆಗೆದ ಶ್ರುತಿಯಲ್ಲಿ ಅಪಸ್ವರವೇನು ಇರಲಿಲ್ಲ
ಆದರೆ ಮೊದಲಿನ ಮಾಧುರ್ಯ ಬರಲಿಲ್ಲ

ಹೊಯ್ದಾಡುತಿದೆ ಮನ ತಂಬೂರಿಯ ಜೊತೆ...

ಮಧುರ ನೆನಪಿನ ಸವಿಯನುಂಡು,
ನವ್ಯ ಬದುಕಿನ ಕನಸ ಕಂಡು.

9 Comments:

Blogger Pramod P T said...

tumbaane chennaagide!!
"ನೀಳ ಜಡೆಯಲ್ಲಿ ಮಲ್ಲಿಗೆ ಮೊಗ್ಗಿನ ಬೆಡಗು" ee saalu sakkat ishTa aaytu.

11/06/2006 5:23 AM  
Blogger Gubbacchi said...

ಧನ್ಯವಾದಗಳು ಪ್ರಮೋದರವರೆ.

11/07/2006 1:02 AM  
Blogger Susheel Sandeep said...

hosatu haLatina
hoydATada naDuve
mAdhurya kaLedukoMDa
adE Srutiya ciMte nimage!

SrutiyAdaroo nAnEke
nuDisabEku, taMbooradoDane SRutipeTTige iTTarAytu sAku
annOdu eecina huDugeera naMbuge

:)

11/08/2006 8:24 AM  
Blogger ಶ್ರೀನಿಧಿ.ಡಿ.ಎಸ್ said...

ಮಸ್ತ್ writingu ಗುಬ್ಬಚ್ಚಿ!!ಚೆನ್ನಾಗಿ ಬರವಣಿಗೆ!

11/15/2006 12:31 AM  
Blogger Jagali bhaagavata said...

ಈ ಕವನ ಪರ್ವಾಗಿಲ್ಲ ಅನ್ನಿಸ್ತು. ಹೀಗೇ ಬರೀತಾ ಇರಿ ಕನ್ನಡದಲ್ಲಿ..ಚೆನ್ನಾಗಿ ಬರತ್ತೆ.

11/23/2006 8:05 PM  
Blogger Phantom said...

ಅದ್ಭುತ ವಾದ ಕವನ.

ಹೀಗೆ ಮುಮ್ದುವರಿಯಲಿ ಕವನ ಮಾಲೆ :)

ಇಂತಿ
ಭೂತ

11/24/2006 6:24 AM  
Blogger Sushrutha Dodderi said...

ಎಲ್ಲೋ ಸುತ್ತುತ್ತಿರಬೇಕಾದರೆ 'ಗುಬ್ಬಚ್ಚಿ' ಕಣ್ಣಿಗೆ ಬಿತ್ತು. ಹೆಸರಿನಿಂದಲೇ ಆಕರ್ಷಿತನಾಗಿ ಗೂಡರಸಿ ಬಂದೆ. ವ್ಹಾವ್! ಗುಬ್ಬಚ್ಚಿ ಗೂಡು ನಿಜಕ್ಕೂ ಅದ್ಭುತ. ಈ ಕವನವಂತೂ ತುಂಬಾ ಚೆನ್ನಾಗಿದೆ.

ಎಲ್ಲಕ್ಕಿಂತ ಇಷ್ಟವಾದದ್ದು ಆ ಬೈ-ಲೈನು: The small world of chinv chinv!

11/27/2006 2:10 AM  
Blogger Gubbacchi said...

@Ullasa: You are true. I can't express my fellings in English as I am doing in Kannada.

ಸುಸಂಕೃತ,
ನನ್ನ ಕವನಕ್ಕಿಂತ ನಿಮ್ಮ ಕವನ ನೈಜತೆ ಹತ್ತಿರವಿದೆ :) ಧನ್ಯವಾದಗಳು.

@srinivas
Surely I will visit.

@ಶ್ರೀನಿಧಿ,
ಧನ್ಯವಾದಗಳು.

@ಭೂತ,
ಧನ್ಯವಾದಗಳು. ಹೆಸರು ಅಭೂತವಾಗಿದೆ.

@ಸುಶ್ರುತರವರೆ,
ಧನ್ಯವಾದಗಳು.

@Jagali Bhagavata
I think this is the second poem, I wrote in kannada. First time I wrote and it was critised like "It is more like the words arrangement and no feeling in it". I know that I couldn't express my feelings in poem, that I only felt most of the time. So I left writing poems. This is the second time I tried again. I completely agree whatever you told. I am not that satisfied with this. :)

I appreciate your honest comment :)

11/27/2006 3:13 AM  
Blogger Anveshi said...

"ತೆಗೆದ ಶ್ರುತಿಯಲ್ಲಿ ಅಪಸ್ವರವೇನು ಇರಲಿಲ್ಲ
ಆದರೆ ಮೊದಲಿನ ಮಾಧುರ್ಯ ಬರಲಿಲ್ಲ"

ಇಂದಿನ ಸ್ಥಿತಿಗೆ ನೀವು ಹಿಡಿದ ಕನ್ನಡಿ ತುಂಬಾ ಚೆನ್ನಾಗಿ ಪ್ರತಿಬಿಂಬ ತೋರುತ್ತಿದೆ. ಎಲ್ಲಿ ಕೊಂಡಿರಿ ಈ ಕನ್ನಡಿ? :)

12/20/2006 2:59 AM  

Post a Comment

<< Home